ಎಂ.ವಿ. ಕೃಷ್ಣರಾವ್ ಅವರು, ರಾಜ್ಯಶಾಸ್ತ್ರ ಮತ್ತು ಇತಿಹಾಸಗಳಲ್ಲಿ ಪರಿಣಿತರಾಗಿದ್ದರು. ಅವರು ಮೈಸೂರು
ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದು, ಅನಂತರ ಮಹಾರಾಜ ಕಾಲೇಜಿನಲ್ಲಿ
ಅಧ್ಯಾಪಕರಾದರು. ಆಮೇಲೆ, ಪ್ರಸಿದ್ಧ ರಾಜ್ಯಶಾಸ್ತ್ರಜ್ಞನಾದ ಹೆರಾಲ್ಡ್ ಲಾಸ್ಕಿಯ ಮಾರ್ಗದರ್ಶನದಲ್ಲಿ
ಸಂಶೋಧನೆ ಮಾಡುವ ಅವಕಾಶ ಪಡೆದು ಲಂಡನ್ನಿಗೆ ತೆರಳಿದರು. ಅಲ್ಲಿಂದ ಹಿಂದಿರುಗಿದ ನಂತರ, ರಾಜ್ಯಶಾಸ್ತ್ರದ
ಸಹಾಯಕ ಅಧ್ಯಾಪಕರಾಗಿ, ಆಮೇಲೆ ಇತಿಹಾಸದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅವರು 1956 ರಲ್ಲಿ ನಿವೃತ್ತರಾದರು.
ಇತಿಹಾಸದ ಬೋಧನೆ ಮತ್ತು ಸಂಶೋಧನೆಗಳ ಕ್ಷೇತ್ರದಲ್ಲಿ ಅವರ ಕೊಡುಗೆಯು ಗಣನೀಯವಾದುದು. ತಲಕಾಡಿನ ಗಂಗರನ್ನು
ಕುರಿತ ಅವರ ಪುಸ್ತಕವು ಇಂದಿಗೂ ಅಧಿಕೃತವೆಂದು ಪರಿಗಣಿತವಾಗಿದೆ. ಕೃಷ್ಣರಾವ್ ಅವರು, ಗ್ರೇಟ್ ಬ್ರಿಟನ್ನಿನ
‘ರಾಯಲ್ ಏಷಿಯಾಟಿಕ್ ಸೊಸೈಟಿ’ಯ
ಸದಸ್ಯರಾಗಿದ್ದರು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯುವ
ಕೆಲಸದಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದರು. ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿರುವ ವಿಶ್ವಕೋಶದಲ್ಲಿ
ಅವರು ಅನೇಕ ನಮೂದುಗಳನ್ನು ಬರೆದಿದ್ದಾರೆ. ಅವರು ಬರೆದಿರುವ ಪುಸ್ತಕಗಳಲ್ಲಿ ಮುಖ್ಯವಾದವನ್ನು ಇಲ್ಲಿ
ಹೆಸರಿಸಲಾಗಿದೆ:
- ‘Gangas of Talakad’, 1936, B.G.Paul, Madras
- ’Studies in Kautilya’, 1958, Munshiram Manchal
Lal, New Delhi
- ‘Growth of Indian Liberalism in the nineteenth
century’, 1951, H. Venkataramaiah and Sons,
Bangalore.
- ‘A brief survey of the Mystic Tradition in religion
and art in Karnataka’ 1959, Vardha Publishing House,
Delhi.
- ‘Purandaradasa and the Haridasa Movement’, 1966,
Karnatak
University,
Dharawad.
- ‘Organised Democracy’, 1952, H. Venkataramaiah
and Sons, Bangalore.
- ‘Karnataka’ (States of our Union series), Publication
division, Ministry of Information and Broadcasting, Govt. of India,
New Delhi
- ‘Glimpses of Karnataka’ (Edited Work)
- ‘ಕರ್ನಾಟಕ
ಇತಿಹಾಸ
ದರ್ಶನ‘,
(ಎಂ. ಕೇಶವ ಭಟ್
ಅವರೊಂದಿಗೆ) 1971, ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರ, ಬೆಂಗಳೂರು.
|